ಹುಡುಕಿ :   
ಯಕ್ಷಗಾನ
ಲೇಖನಗಳು
ಸ೦ದರ್ಶನಗಳು
ಸುದ್ದಿ ಜಾಲ
ಸುದ್ದಿ-ಸಮುಚ್ಛಯ
ಸ೦ಘಗಳು
ಪ್ರಸ೦ಗಗಳು
ಪುಸ್ತಕಗಳು
ಮೇಳಗಳು
ಹಾಡುಗಳು
ತಾಳಮದ್ದಲೆ
ದೃಶ್ಯಾವಳಿ
ವ್ಯಕ್ತಿ ವಿಶೇಷ
ಭಾಗವತರು
ಅರ್ಥಧಾರಿಗಳು
ಪುರುಷ ಪಾತ್ರಧಾರಿಗಳು
ಸ್ತ್ರೀ ಪಾತ್ರಧಾರಿಗಳು
ಹಿಮ್ಮೇಳ ವಾದಕರು
ಹಾಸ್ಯಗಾರರು
ತರಬೇತಿ
ನಮ್ಮ ಬಗ್ಗೆ ಮುಖಪುಟ
 
ಸುದ್ದಿ - ಸಮುಚ್ಛಯ
Share
ಕುಂಟಿಕಾನಮಠ ಸಂಸ್ಥೆಯಿಂದ "ಲಂಡನ್‌ ಯಕ್ಷಗಾನ ಸ್ಪರ್ಧೆ, 40 ಲಕ್ಷ ಬಹುಮಾನ!

ಲೇಖಕರು :
ಸತೀಶ್ ನಾಯಕ್ , ಪಕಳಕು೦ಜ
ಭಾನುವಾರ, ಒಕ್ಟೋಬರ್ 20 , 2013
ಒಕ್ಟೋಬರ್ 20 , 2013

ಕುಂಟಿಕಾನಮಠ ಸಂಸ್ಥೆಯಿಂದ "ಲಂಡನ್‌ ಯಕ್ಷಗಾನ ಸ್ಪರ್ಧೆ, 40 ಲಕ್ಷ ಬಹುಮಾನ!

ಬೆಂಗಳೂರು : ಯಕ್ಷಗಾನ ಕಲೆಯನ್ನು ಪ್ರೋತ್ಸಾಹಿಸುವ ಸಲುವಾಗಿ ಲಂಡನ್‌ ಮೂಲದ ಕುಂಟಿಕಾನಮಠ ಸಂಸ್ಥೆ, 2014ರ ಆಗಸ್ಟ್‌ನಲ್ಲಿ "ಲಂಡನ್‌ ಯಕ್ಷಗಾನ ಸ್ಪರ್ಧೆ' ಏರ್ಪಡಿಸಿದ್ದು, ವಿಜೇತ ತಂಡ ಹತ್ತು ದಿನಗಳ ಕಾಲ ಇಂಗ್ಲೆಂಡ್‌ನ‌ಲ್ಲಿ ಪ್ರದರ್ಶನ ನೀಡಲು ವೇದಿಕೆ ಕಲ್ಪಿಸಲಿದೆ.

ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಸಂಸ್ಥೆ ನಿರ್ದೇಶಕ ಕುಮಾರ್‌ ಕುಂಟಿಕಾನಮಠ, ಕರಾವಳಿ ಭಾಗದ ಜನರ ಜೀವನದ ಭಾಗವಾಗಿದ್ದ ಯಕ್ಷಗಾನ ಕಲೆ ದಿನದಿಂದ ದಿನಕ್ಕೆ ಆಸಕ್ತಿ ಕಳೆದುಕೊಳ್ಳುತ್ತಿದೆ. ಹೀಗಾಗಿ, ಯಕ್ಷಗಾನದ ವಿಶೇಷತೆಗಳನ್ನು ಪ್ರಚುರ ಪಡಿಸುವಸಲುವಾಗಿ 2014ರ ಆಗಸ್ಟ್‌ನಲ್ಲಿ ಲಂಡನ್‌ ಯಕ್ಷಗಾನ ಸ್ಪರ್ಧೆ ಏರ್ಪಡಿಸಲಾಗುತ್ತಿದೆ. ತೆಂಕು ಮತ್ತು ಬಡಗು ಎರಡು ಯಕ್ಷಗಾನ ಪ್ರಕಾರಗಳಿಗೂ ಪ್ರತ್ಯೇಕ ಸ್ಪರ್ಧೆ ನಡೆಯಲಿದೆ. 2014ರ ಆಗಸ್ಟ್‌ ತಿಂಗಳ ಮೊದಲ ವಾರದಲ್ಲಿ ಮಂಗಳೂರು ಮತ್ತು ಉಡುಪಿಯಲ್ಲಿ ಸ್ಪರ್ಧೆಗಳು ನಡೆಯಲಿದ್ದು, ಅಗಸ್ಟ್‌ ಕೊನೆ ವಾರದಲ್ಲಿ ಬೆಂಗಳೂರಿನಲ್ಲಿ ಅಂತಿಮ ಸ್ಪರ್ಧೆ ನಡೆಯಲಿದೆ ಎಂದು ವಿವರಿಸಿದರು.

2013ರ ನವೆಂಬರ್‌ನಿಂದ 2014ರ ಜನವರಿವರೆಗೆ ನಡೆಯಲಿರುವ ಸ್ಪರ್ಧೆಗೆ 1.5 ಕೋಟಿ ರೂ. ವೆಚ್ಚ ತಗುಲಲಿದ್ದು, ಆಸಕ್ತ ಯಕ್ಷಗಾನ ತಂಡಗಳ ಹೆಸರನ್ನು ನೋಂದಾಯಿಸಿಕೊಳ್ಳಲಾಗುತ್ತದೆ. ಉತ್ತಮ ಭಾಗವತ, ಮದ್ದಳೆ, ಚೆಂಡೆ, ನೃತ್ಯ, ಅಭಿನಯ, ಮಾತುಗಾರಿಕೆ, ಹಾಸ್ಯ, ಸ್ತ್ರೀವೇಷ ಕಲಾವಿದರಿಗೆ ಪ್ರತ್ಯೇಕ ಬಹುಮಾನಗಳಿರುತ್ತವೆ. ವಿಜೇತ ತಂಡಕ್ಕೆ 40 ಲಕ್ಷ ರೂ. ನಗದು ಬಹುಮಾನ ಹಾಗೂ ಹತ್ತು ದಿನಗಳ ಮಟ್ಟಿಗೆ ಇಂಗ್ಲೆಂಡ್‌ನ‌ಲ್ಲಿ ಪ್ರದರ್ಶನ ಏರ್ಪಡಿಸಲಾಗುವುದು ಎಂದರು.

ಸುಮಾರು 40ಕ್ಕೂ ಹೆಚ್ಚಿನ ತಂಡಗಳು ಭಾಗವಹಿಸುವ ನಿರೀಕ್ಷೆಯಿದೆ. ಸ್ಪರ್ಧೆಯಲ್ಲಿ ಪಾಲ್ಗೊಳ್ಳುವಂತೆ ಯಕ್ಷಗಾನ ತಂಡದ ಮುಖ್ಯಸ್ಥರಿಗೆ ಮನವಿ ಮಾಡಿಕೊಳ್ಳಲಾಗುವುದು. ಹೆಚ್ಚಿನ ಮಾಹಿತಿಗಾಗಿ ಸಂಸ್ಥೆಯ ನಿರ್ದೇಶಕ ಗಣೇಶ್‌ ಭಟ್‌,ಮೊ. 90359 13672 ಸಂಪರ್ಕಿಸಬಹುದು ಎಂದರು.

ಕೃಪೆ : http://www.udayavani.com/


Share





ಈ ಲೇಖನಕ್ಕೆ ನಿಮ್ಮ ಪ್ರತಿಕ್ರಿಯೆ       
Your Name : Your Email :
Your Feedback :
 
ಓದುಗರ ಪ್ರತಿಕ್ರಿಯೆಗಳು
ಈ ಲೇಖನಕ್ಕೆ ಪ್ರತಿಕ್ರಿಯಿಸುವಲ್ಲಿ ನೀವು ಮೊದಲಿಗರಾಗಿ




ಪೂರಕ ಲೇಖನಗಳು
 



ತಾಜಾ ಲೇಖನಗಳು
 
ಇದು ಯಕ್ಷಗಾನ ಕಲೆಯ ಸ೦ಪೂರ್ಣ ಮಾಹಿತಿ ಹಾಗೂ ಪ್ರಸರಣಕ್ಕಾಗಿ ಮೀಸಲಿರುವ ಅ೦ತರ್ಜಾಲ ತಾಣ.
ಇದರಲ್ಲಿ ಪ್ರಕಟವಾಗುವ ಕೆಲವು ಲೇಖನಗಳು ಅ೦ತರ್ಜಾಲದಲ್ಲಿರುವ ಮಾಹಿತಿಗಳಿ೦ದ ಕಲೆಹಾಕಲ್ಪಟ್ಟಿದ್ದು, ಯಾವುದೇ ಕು೦ದು ಕೊರತೆಗಳಿದ್ದಲ್ಲಿ ದಯವಿಟ್ಟು ಸ೦ಪರ್ಕಿಸಿ.
ನಮ್ಮ ಬಗ್ಗೆ  |  ಲೇಖಕರ ಬಳಗ  |  ಸ೦ಪರ್ಕಿಸಿ  |  Font Help
 
© ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ